" ಅಪ್ಪನ ಸಾವನ್ನೇ ಅರಿಯದ ಮಗ. ದ್ರಶ್ಯ ಕಂಡ ಅನೇಕರ ಕಣ್ಣಲ್ಲಿ ಜಾರಿತು ಹನಿ. "
" ಕಾಸರಕೊಡ ತೊಪ್ಪಲ ಕೇರಿಯ
ಸತೀಶ್ ಭಟ್ ಇನ್ನಿಲ್ಲ "
ಹೊನ್ನಾವರ :
ಸಾವು ಎಂದರೇನು ಎಂದು ಅರಿಯದ ಮಗ ಮನೆಯ ಅಂಗಳಲ್ಲಿ ಮೊಬೈಲ್ ಹಿಡಿದು ಬಂದವರ ಕಡೆ ಕ್ಯಾಮರಾ ಹಿಡಿದ್ದಿದಾನೆ.. ಇನ್ನೊಂದು ಮೂಲೆಯಲ್ಲಿ ಅಪ್ಪ ಶವವಾಗಿ ಮಲಗಿದ್ದಾನೆ. ಅಪ್ಪ ಎನ್ನುವ ಜೀವ ನನ್ನ ನಾಳೆಯ ದಿನದಲ್ಲಿ ಕಾಣಲು ಇರುವುದೇ ಇಲ್ಲವಲ್ಲ ಎನ್ನುವ ಅರಿಯದ ವಯಸ್ಸು. ಅಯ್ಯೋ ವಿಧಿಯೇ ! ಕಣ್ಣಲ್ಲಿ ಹನಿ ತುಂಬಿ ಹೋಯಿತು. ಅಲ್ಲಿ ಇಲ್ಲಿ ಕುಳಿತು ಅಗಲಿ ಹೋದ, ಮತ್ತೆ ಬೇಕು ಎಂದರೆ ಪ್ರಪಂಚದ ಯಾವ ಮೂಲೆಯಲ್ಲೂ ಕಾಣಸಿಗದ ಆತ್ಮೀಯನ ನೆನಪಲ್ಲಿ ಕಣ್ಣೀರಿಡುತ್ತ ಕುಂತ ದ್ರಶ್ಯ.
ಕೇರಿಯವರೆಲ್ಲ ಬಂದು ತಡೆದರೂ ರೆಪ್ಪೆ ದಾಟಿ ಬರುವ ಕಣ್ಣೀರನ್ನು ಒರೆಸಿ ಕೊಳ್ಳುತ್ತಿರುವ ಸಂದರ್ಭ. ಇವೆಲ್ಲವೂ ಕಂಡು ಬಂದಿದ್ದು ಇಂದು ಬೆಳಿಗ್ಗೆ ಕಾಸರಕೋಡ ಪಂಚಾಯತ್ ಎದುರು ಇರುವ ಮನೆಯೊಂದರಲ್ಲಿ.
ಹೆಸರು ನಾರಾಯಣ ಎಂದಾದರೂ ಎಲ್ಲರ ಬಾಯಲ್ಲೂ ಸತೀಶ್ ಭಟ್ ಎಂದೇ ಕರೆಸಿಕೊಂಡು ಮಾತಾಡಿಸಿ, ಆತ್ಮೀಯತೆ ಬೀರುವ ಜಾಗ ಕಾಸರಕೋಡ ಪಂಚಾಯತ್ ಎದುರು ಇರುವ ಸಣ್ಣ ಜೋರೆಕ್ಸ್ ಅಂಗಡಿ. ಆದರೆ ಈ ಸ್ಥಳದಲ್ಲಿ ಇನ್ನೂ ಮುಂದೆ ಇವರನ್ನು ಕಾಣಲು ಸಾಧ್ಯವಿಲ್ಲ. ಅಲ್ಲೆಲ್ಲ ಬರಿ ನೆನಪು ಮಾತ್ರ. ಸಾವಿನ ಮನೆಯ ಸೇರಿ ಪ್ರೀತಿ ಒಲುಮೆ, ಸ್ನೇಹ ಆತ್ಮೀಯತೆಯ ಬೀರಿದವರ ಹೃದಯದಲ್ಲಿ ಸಾಯಬಾರದಿತ್ತು ಎನ್ನುವ ಒಲವನ್ನು ಪಡೆದು ಸಾಗಿದ್ದಾರೆ.
ನಿಜ ಹೆಸರು ನಾರಾಯಣ ಭಟ್. ಆತ್ಮೀಯರ ಬಾಯಲ್ಲಿ , ಸತೀಶ್ ಭಟ್ ಎಂತಲೇ ಪರಿಚಿತರು. ಕಾಸಕೋಡ ಪಂಚಾಯತ್ ಎದುರಿಗೆ ಇವರ ಮನೆ. ಅಲ್ಲೇ ಒಂದು ಸಣ್ಣ ಅಂಗಡಿ. ಅಲ್ಲಿಗೆ ಬರುವ ಎಲ್ಲರಿಗೂ ಹೃದಯ ತೆರೆದು ಮಾತಾಡುವ ಸಹೃದಯಿ. ಇಡೀ ಕಾಸರಕೋಡಿನ ಪಂಚಾಯತ್ ವ್ಯಾಪ್ತಿಯ ಜನರು ಸರ್ಕಾರಿ ಕಚೇರಿಯ ಕೆಲಸ ಕಾರ್ಯಗಳಿಗೆ ಆರ್ಜಿ ಹಾಕಲು ಇವರಲ್ಲಿಗೆ ಬರುತ್ತಾರೆ. ಎಲ್ಲರಿಂದಲೂ ಆತ್ಮೀಯತೆ, ಪ್ರೀತಿ ಗಳಿಸಿದ ವ್ಯಕ್ತಿ ಇವರಾಗಿದ್ದರು.
ಅತ್ಯಂತ ಸರಳ ಹಾಗೆ ತನ್ನದೆ ಶಿಸ್ತಿನ ವ್ಯಕ್ತಿತ್ವ ಹೊಂದಿದ್ದರು. ತಾನಾಯಿತು ತನ್ನ ಕೆಲಸವಾಯಿತು ಎನ್ನುವ ರೀತಿಯಲ್ಲಿ ಇದ್ದವರು.
ಹೋದಾಗೆಲ್ಲ ಅಣ್ಣ ಎಂದು ಕರೆಯುತ್ತಿದ್ದೆ. ಕೇಳಿದ ವಿಷಯಕ್ಕೆ ತನಗೆ ತಿಳಿದಷ್ಟನ್ನು ಹೇಳುತ್ತಿದ್ದರು.
ವಯಸ್ಸು 50. ಕಾಡಿದ ಸಣ್ಣ ಪುಟ್ಟ ಅನಾರೋಗ್ಯ ಸಾವಿಗೆ ಕಾರಣವಾಯ್ತು. ಯಾರ ಬಾಯಲ್ಲೂ ಇವರ ಕುರಿತಾಗಿ ಸಾವಿನ ಮೊದಲು ಸಹ ಬೇಡದೆ ಇರುವ ಮಾತು ಕೇಳಿಲ್ಲ.
ಕೊಡುವ ಕೈಯ್ಯು ಅವರದಾಗಿತ್ತು.
ಕೊರೊನ ಲಸಿಕೆ ಸಣ್ಣ ಪುಟ್ಟ ಅನಾರೋಗ್ಯ ಇದ್ದ ಅನೇಕರಿಗೆ ವ್ಯತಿರಿಕ್ತ ಆಗುತ್ತಿದೆ ಎನ್ನುವ ಮಾತು ಹೆಚ್ಚು ಕೇಳಿ ಬಂತು.
ಬದುಕನ್ನು ಅರಿಯದ ಒಬ್ಬ ಮಗ, ಹೆಂಡತಿ, ತಾಯಿ, ಸಹೋದರ ಹಾಗೆ ಅಪಾರ ಪರಿಚಯದ ಹೃದಯದಿಂದ ದೂರ ಸಾಗಿ ಮರೆಯಾಗಿ ಹೋದರು.
ನಿಮ್ಮ ಆತ್ಮಕ್ಕೆ ಸದ್ಗತಿ ದೊರೆಯಲಿ.ಮನೆಯವರಿಗೆ, ಆತ್ಮೀಯರಿಗೆ ದುಃಖ ಸಹಿಸುವ ಶಕ್ತಿ ನೀಡಲಿ.
ಹಳ್ಳಿ ( ಶುದ್ಧಿ ) ನ್ಯೂಸ್
No comments