"ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ 3ನೇ ದಿನ
WhatsApp
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ 3ನೇ ದಿನದ ವೇದಿಕೆ ನಡೆದ ಪ್ರೇಕ್ಷಕರ ಸಮ್ಮುಖದಲ್ಲಿ ವೇದಿಕೆಯಲ್ಲಿರುವ ವಿದ್ವತ್ಪೂರ್ಣರ ಕೈಗಳಿಂದ ದೀಪ ಬೆಳಗುವುದರ ಮೂಲಕ ಉದ್ಘಾಟನೆಗೊಂಡಿತು. ಕೆರೆಮನೆ ರಾಷ್ಟ್ರೀಯ ನಾಟ್ಯೋತ್ಸವದ ವೇದಿಕೆ ಅಂತಂದ್ರೆ ಅನನ್ಯ ಅನುಭವಗಳ ಮೇರು ಸದೃಶ ವ್ಯಕ್ತಿತ್ವದ ವ್ಯಕ್ತಿಗಳಿಂದ ತುಂಬಿರುವ ವೇದಿಕೆ.ಹಾಗಾಗಿ ವೇದಿಕೆಯ ಭಾಷಣವನ್ನು ಕೇಳುವುದೆಂದರೆ ಅನುಭವಪೂರ್ಣವಾದ ಒಂದು ಪುಸ್ತಕವನ್ನು ಓದಿದ ಹಾಗೆ. ಅನೇಕ ವಿದ್ವತ್ಪೂರ್ಣ ಮಹನೀಯರ ಸಮ್ಮಿಲನ ಈ ವೇದಿಕೆಯಾಗಿರುತ್ತದೆ. ಕೇಳುಗ ಹೃದಯಗಳಿಗೆ ಅನುಭವಗಳನ್ನು, ಆನಂದವನ್ನು, ಭಾವ ವೈವಿಧ್ಯತೆಯನ್ನು, ಕೊಡುವುದರ ಕಾರಣಕ್ಕಾಗಿ ಒಂದು ವೇದಿಕೆ ಅರ್ಥಪೂರ್ಣ ವೇದಿಕೆಯಾಗಿ ಪರಿಣಮಿಸುತ್ತದೆ.
ಬನ್ನಿ ಇಂದಿನ ಮೂರನೇ ದಿನದ ನಾಟ್ಯೋತ್ಸವದ ವೇದಿಕೆಯಲ್ಲಿ ಏನೆಲ್ಲ ನಡೆಯಿತು ಎನ್ನುವುದನ್ನು ನೋಡಿ ಬರೋಣ.
ಶ್ರೀ ಮೋಹನ ಹೆಗಡೆ ಮುಖ್ಯ ಸಂಪಾದಕರು ಸಂಯುಕ್ತ ಕರ್ನಾಟಕ ಹುಬ್ಬಳ್ಳಿ ಇವರಿಗೆ ರಾಷ್ಟ್ರೀಯ ನಾಟ್ಯೋತ್ಸವ ಸಮ್ಮಾನ ಪಡೆದು ಮಾತನಾಡುತ್ತ ಸರಕಾರದ ಸಹಕಾರ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಪಡೆಯಬೇಕಾದರೆ ಅರ್ಧ ಜೀವ ಮುಗಿದು ಹೋಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಮಾತಾಡಿದ ಜಿ ಎಸ್ ಭಟ್ ಮೈಸೂರು, 87 ವರ್ಷದ ಕೆರೆಮನೆ ಮೇಳಕ್ಕೆ ರಾಜ್ಯೋತ್ಸವ ಪ್ರಶಸ್ತಿ ನೀಡದೆ ಇರೋದು ನೋವಿನ ಸಂಗತಿ. ಮಧ್ಯಪ್ರದೇಶ ಸರ್ಕಾರಕ್ಕೆ ಕೆರೆಮನೆ ಮೇಳದ ಸಾಧನೆಗೆ ಕಾಣುತ್ತೆ. ಕರ್ನಾಟಕ ಸರ್ಕಾರಕ್ಕೆ ಕಾಣದೆ ಇರೋದು ಶೋಚನಿಯ. ಯಕ್ಷಗಾನ ಅಧ್ಯಯನಕ್ಕೆ ಒಂದು ವಿಶ್ವ ವಿದ್ಯಾಲಯ ಬೇಕು. ಅದು ಗುಣವಂತೆಯಲ್ಲಿ ಸ್ಥಾಪನೆ ಆಗಬೇಕು ಎಂದರು.
ಇಂತ ಕಾರ್ಯಕ್ರಮ ಗುಣವಂತೆಯಂತ ಹಳ್ಳಿಯಲ್ಲಿ ಆಯೋಜಿಸುವುದು ಜೋಕ್ ಅಲ್ಲ. ಇಡಗುಂಜಿಯ ಅನುಗ್ರಹ ಇರೋದ್ರಿಂದ ಇದು ಸಾಧ್ಯವಾಗಿದೆ ಎಂದರು ಮುಖ್ಯ ಅತಿಥಿಯಾಗಿ ಮಾತನಾಡಿದ
ಶ್ರೀಮತಿ ಸೇಫಾಲಿ ವೈದ್ಯ ಪುನಾ ಬರಹಗಾರರು,ಚಿಂತಕರು ಹೇಳಿದರು.
ಶ್ರೀ ಜಗದೀಶ್ ಹೆಬ್ಬಾರ್ ಕಾರಿಜ ಸಹಕಾರಿ ಧುರೀಣರು ಕಲಾ ಸಂಘಟಕರು ಮೈಸೂರು ಮಾತನಾಡುತ್ತ ಕೆಲವು ಹವ್ಯಾಸಿ ಕಲಾವಿದರು ತಾವು ಮಾಡುವ ಯಕ್ಷಗಾನದ ಸಂದರ್ಭದಲ್ಲಿ ನಿಜವಾದ ಕಲಾವಿದರನ್ನು ಸೇರಿಸಿ ಕೊಳ್ಳಬೇಕು, ಕಲೆಯನ್ನು ನಂಬಿ ಕೊಂಡವರಿಗೆ ವಂಚನೆ ಆಗಬಾರದು. ಮಕ್ಕಳಿಗೆ ನಮ್ಮ ಸಂಸ್ಕೃತಿ ಹೇಳಿಕೊಡಬೇಕು. ಈ ಕಾರ್ಯಕ್ರಮ ಧರ್ಮದ ಮತ್ತು ರಾಷ್ಟ್ರದ ಕೆಲಸ ಎಂದು ಭಾವಿಸಿದ್ದೇನೆ. ನಾವು ನಮ್ಮ ಮಕ್ಕಳಿಗೆ ಯಾವುದಾದರು ಒಂದು ಕಲೆಯನ್ನು ಹೇಳಿಕೊಡೋಣ ಎಂದರು.
ಶ್ರೀಮತಿ ಮಮತಾದೇವಿ ಜಿ.ಎಸ್ ಕೆ.ಎ.ಎಸ್ ಮಾನ್ಯ ಸಹಾಯಕ ಆಯುಕ್ತರು ಭಟ್ಕಳ ಮಾತನಾಡುತ್ತ ಕಲೆ ಸಂಸ್ಕೃತಿಯನ್ನು ಬೆಳೆಸುತ್ತ ಬರುವ ವೇದಿಕೆ ಇದಾಗಿದೆ.ಕನ್ನಡ ಸಂಸ್ಕೃತಿ ಇಲಾಖೆಯಿಂದ ನನ್ನ ಆಡಳಿತ ಅವಧಿಯಲ್ಲಿ ಖಂಡಿತ ಸಹಾಯ ಮಾಡ್ತೇನೆ. ಕಲೆಗೆ ಮೂಡಿಪಾಗಿಟ್ಟವರ ಸಂಘಟನೆ ಇದಾಗಿದೆ.ಸ್ವಾಭಾವಿಕವಾಗಿ ಮೆಚ್ಚುವವರು ಈ ಭಾಗದವರು.ಕರಾವಳಿ ಕರ್ನಾಟಕದಲ್ಲಿ ಕಲೆ, ಸಂಸ್ಕೃತಿ, ವಿಶ್ವ ವ್ಯಾಪಿ ಆಗುವುದಕ್ಕೆ ಕಾಂತರ ಕಾರಣ ಆಗಿದೆ. ಇದು ಕೇವಲ ಚಲನ ಚಿತ್ರ ಮಾತ್ರ ಆಗಿರದೆ ಇದು ಸಂಸ್ಕೃತಿಯ ಸಮುಚ್ಚಯ ಆಗಿದೆ.ನಾ ಎಲ್ಲೇ ಇದ್ದರು ನನ್ನ ಈ ವೇದಿಕೆಯಲ್ಲಿ ಭಾಗಿಯಾಗಿಸಿ ಕೊಳ್ಳಿ
ಎಂದು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯ ನಂತರ ನವಿಲು ಪುರಾಣ ನಾಟಕ ಪ್ರೇಕ್ಷಕರನ್ನು ಯಾವುದೋ ಒಂದು ಮೌನ ಲೋಕಕ್ಕೆ ಕರೆದುಕೊಂಡು ಹೋಯಿತು. ಯುದ್ಧದ ಮಹಾ ದುರಂತವನ್ನು ಪ್ರೇಕ್ಷಕರ ಅಂತರಂಗಕ್ಕೆ ಮುಟ್ಟಿಸುವಲ್ಲಿ ಯಶಸ್ವಿಯಾಯಿತು.
ಭಾವ ಶುದ್ಧಿ
05/02/2023.
No comments