ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮಾರೋಪ ಸಮಾರಂಭ ಐದನೆಯ ದಿನ. ಏನೆಲ್ಲಾ ನಡೆಯಿತು.
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸನ್ಮಾನ, ಸಮಾರೋಪ ಸಮಾರಂಭ
ಹೊನ್ನಾವರ : ಯಕ್ಷ ಕಾಶಿ ಎಂದೆ ಪ್ರಸಿದ್ಧಿ ಪಡೆದಿರುವ ಗುಣವಂತೆಯಲ್ಲಿ ನಡೆಯುತ್ತಿರುವ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಕೊನೆಯ ದಿನ ಇಂದು. ಗಣ್ಯಮಾನ್ಯ ಕೈಗಳಿಂದ ದೀಪ ಬೆಳಗುವುದರ ಮೂಲಕ ಐದನೇ ದಿನದ ಈ ವರ್ಷದ ನಾಟ್ಯೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು. ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಈ ರಾಷ್ಟ್ರೀಯ ನಾಟ್ಯೋತ್ಸವ ವೇದಿಕೆಯಲ್ಲಿ ಹಲವು ವಿದ್ವತ್ಪೂರ್ಣ ವ್ಯಕ್ತಿಗಳ ಮಾತು ಇಡೀ ಪ್ರೇಕ್ಷಕ ವರ್ಗಕ್ಕೆ ಒಂದು ಅನುಭವಪೂರ್ಣವಾದಂತಹ ಹತ್ತು ಹಲವು ವೈಚಾರಿಕ ಚಿಂತನಾಶೀಲ ಬರಹ ಲೇಖನಗಳ ಅನುಭವಗಳನ್ನು ಪುಸ್ತಕ ರೂಪದಲ್ಲಿ ತೆರೆದಿಟ್ಟಂತೆ ಇತ್ತು. ಈ ವೇದಿಕೆಯೇ ಹೀಗೆ, ಅನನ್ಯವಾದಂತ ಅಧ್ಯಯನಶೀಲರ ಸಾಧಕರ ಕಲಾ ಪೋಷಕರ ಮಹಾಸಂಗಮ. ಹಾಗಾಗಿ ಉಳಿದ ವೇದಿಕೆಗಿಂತ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ವೇದಿಕೆ ಅಂತಂದ್ರೆ ಅದಕ್ಕೆ ಒಂದಿಷ್ಟು ಜನ ಪ್ರೇಕ್ಷಕ ವಲಯವೇ ಮುಂದೆ ಬಂದು ಕುಳಿತು ಕಿವಿಗಳನ್ನು ತೆರೆದು ಕೇಳುತ್ತಿರುತ್ತಾರೆ.
ನಾಟ್ಯೋತ್ಸವದ ಸಮಗ್ರ ಅವಲೋಕನ ಶ್ರೀ ನಾರಾಯಣ ಯಾಜಿ, ಸಾಲೆಬೈಲು, ಖ್ಯಾತ ಅಂಕಣಕಾರರು ಹಾಗೂ ಸಾಂಸ್ಕೃತಿಕ ಚಿಂತಕರು ಇವರು ಮಾರ್ಮಿಕವಾಗಿ ಮಾತನಾಡಿದರು.
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಕೊನೆಯ ಹಾಗೂ ಐದನೇ ದಿನದ ಈ ವೇದಿಕೆಯಲ್ಲಿ ಶ್ರೀ ಕೊಗ್ಗ ಆಚಾರಿ ಯಕ್ಷಗಾನ ಕಲಾವಿದರು ಕೊಲ್ಲೂರು ಭಾಗವತರು, ಕಲಾ ಪೋಷಕರು ಸಜ್ಜನರು, 44 ವರ್ಷ ಚೆಂಡೆ ವಾದಕರಾಗಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಯಕ್ಷ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅನಾರೋಗ್ಯದ ನಡುವೆಯೂ ಗುಣವಂತೆಗೆ ಬಂಧು ಪ್ರಶಸ್ತಿ ಸ್ವೀಕರಿಸದರು.ಇವರ ಕಲಾ ಅಭಿಮಾನ, ಪ್ರೇಕ್ಷಕರ ಹೃದಯಭಾವಕ್ಕೆ ಹೆಮ್ಮೆ ಹುಟ್ಟಿಸಿತು.
ಡಾ| ಜಿ. ಎಲ್. ಹೆಗಡೆ ಯಕ್ಷಗಾನ ಸಂಶೋಧಕರು ವಿದ್ವಾಂಸಕರು.ವೇಷದಾರಿ, ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದವರು, ಪ್ರಥಮ ಯಕ್ಷಗಾನ ಸಮ್ಮೇಳನದ ದೊಡ್ಡ ಜವಾಬ್ದಾರಿಯ ರೂವಾರಿಗಳು.ಸನ್ಮಾನ ಸ್ವೀಕರಿಸಿದರು.
ವಿದ್ಯಾವಾಚಸ್ಪತಿ ಶ್ರೀ ಉಮಾಕಾಂತ್ ಭಟ್ ಕೆರೆಕೈ ಸಂಸ್ಕೃತ ವಿದ್ವಾಂಸರು ತಾಳಮದ್ದಳೆ ಅರ್ಥ ದಾರಿಗಳು, ಸಂಸ್ಕ್ರತ, ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ಕೊಟ್ಟವರು. ನಾಟ್ಯೋತ್ಸವ ಸನ್ಮಾನ ಸ್ವೀಕರಿಸಿ ಮಾತನಾಡಿದರು
ಶ್ರೀ ಚಪ್ಪರಮನೆ ಶ್ರೀಧರ್ ಹೆಗಡೆ ಯಕ್ಷಗಾನ ಕಲಾವಿದರು ಶಿರಿಸಿ. ರಾಷ್ಟ್ರೀಯ ನಾಟ್ಯೋತ್ಸವ ಸಮಾನವನ್ನು ನೀಡಿ ಗೌರವಿಸಲಾಯಿತು. ಹಾಸ್ಯರಸದ ಪರಿಶುದ್ಧವಾಗಿರು ಕಲಾವಿದರು ಇವರು.
ಶ್ರೀಮಯ ಕಲಾ ಪೋಷಕ 2021 ಈ ಪ್ರಶಸ್ತಿಗೆ ಶ್ರೀ ವೆಂಕಟರಮಣ ಹೆಗಡೆ ಕವಲಕ್ಕಿ ಉದ್ಯಮಿಗಳು ಇವರ ಮುಡಿಗೇರಿತು.ವೆಂಕಟರಮಣ ಹೆಗಡೆ ಉದ್ಯಮ ಕ್ಷೇತ್ರದಲ್ಲಿ ಇದ್ದರು, ಕಲಾ ಸಾಂಸ್ಕೃತಿಗೆ ಕೊಡುಗೆ ದೊಡ್ಡದು. ಶರಾವತಿ ಉತ್ಸವ ಮಾಡುತ್ತಾ ಬಂದವರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತ ಕಲಾ ಪೋಷಕ ಪ್ರಶಸ್ತಿ ನೀಡಿರುವ ಕೆರೆಮನೆ ಅವರಿಗೆ ಅಭಿನಂದನೆಗಳು, ಸಂಬಂಧಿಕರ ಮಧ್ಯ ಬೇಡ ಅಂದೆ. ಸರಿಯಾಗಲಾರದು ಎಂಬ ಭಾವನೆಯಿಂದ, ಕೆಲವರನ್ನು ಕೇಳಿ, 16 ವರ್ಷದಿಂದ ಶರಾವತಿ ಸಾಂಸ್ಕೃತಿಕ ವೇದಿಕೆಯ ಲೆಕ್ಕದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ ಎಂದರು.
ಅಧ್ಯಕ್ಷತೆಯನ್ನು ಶ್ರೀ ಜಿ.ಯು. ಭಟ್ ಮಾನ್ಯ ಹಿರಿಯ ಪತ್ರಿಕ ವರದಿಗಾರರು ವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು
ರೋಹಿದಾಸ ನಾಯ್ಕ . ಸಾಹಿತಿಗಳು, ಪೋಷಕರು, ಡಾ ಜಿ ಜಿ ಹೆಗಡೆ ಕಲೆ ಶಿಕ್ಷಣ ಪ್ರೇಮಿ ರಾಜಕೀಯ ಧುರೀಣರು, ಗಣಪಯ್ಯ ಗೌಡ ಊರ ಹಿರಿಯರು ಉಪಸ್ಥಿತರಿದ್ದು ಮಾತನಾಡಿದರು.
ಕಾರ್ಯಕ್ರಮದ ಅಂತಿಮ ಹಂತದಲ್ಲಿ ಕೆರೆಮನೆ ಶಿವಾನಂದ ಹೆಗಡೆಯವರು ಅಭಿನಂದನ ಭಾಷಣವನ್ನು ಮಾಡುತ್ತಾ ಯಕ್ಷಗಾನದ ಬಾಹ್ಯ ಸೌಂದರ್ಯಕ್ಕೂ ಅಂತರಂಗಿಕವಾದ ನೋವಿಗೂ ಒಂದು ಸೆಮಿನರಾಗಬೇಕಿದೆ ಎಂದರು. ಜಿಲ್ಲೆಯ 300ಕ್ಕೂ ಹೆಚ್ಚು ಶಾಲೆಗಳಿಗೆ ಯಕ್ಷಗಾನ ಕಲಿಕೆಯ ಮಕ್ಕಳನ್ನು ಕಳಿಸುವಂತೆ ಪತ್ರ ಬರೆದೆ ಒಬ್ಬರಿಂದ ಒಂದು ಪತ್ರ ಪುನಃ ನನಗೆ ಬಂದಿಲ್ಲ.
ಪ್ರವೀಣ ಗೋಡ್ಕಿಂಡಿಯವರ ಕೊಳಲು ವಾದಾದನದ ವಿಡಿಯೋ
ಉತ್ತರ ಕನ್ನಡದಲ್ಲಿ ಯಾವುದೇ ಕಾರ್ಯಕ್ರಮ ಮಾಡಿದರು ಸಹಕಾರ ಅಷ್ಟಕ್ಕಷ್ಟೇ ಅದರಲ್ಲೂ ಯಕ್ಷಗಾನಕಂತು ಇನ್ನು ಸಹಕಾರ ಕಷ್ಟ ಎಂದರು. ವೇದಿಕೆಯ ಕಾರ್ಯಕ್ರಮ ನಂತರ ಶ್ರೀ ಪ್ರವೀಣ್ ಗೋಡ್ಕಿಂಡಿ ಇವರ ಕೊಳಲು ವಾದನ ಜನರ ಮೆಚ್ಚುಗೆಯ ಪಾತ್ರವಾಯಿತು.
ಅಂತಿಮವಾಗಿ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇವರಿಂದ ಹಿರಣ್ಯಾಕ್ಷ ವಧ ಯಕ್ಷಗಾನ ಪ್ರದರ್ಶನಗೊಳ್ಳುವುದರ ಮೂಲಕ 13ನೆಯ ನಾಟ್ಯೋತ್ಸವದ ಐದನೆಯ ದಿನ ಅಭೂತಪೂರ್ವ ಯಶಸ್ಸನ್ನು ಖಂಡಿತು..
ಹಳ್ಳಿ (ಶುದ್ಧಿ ) ನ್ಯೂಸ್
ಭಾವ ಶುದ್ಧಿ
8/02/2023
ಸಂಬಂದಿತ ವಿಡಿಯೋಗಳು:
No comments